ಪಂಜಾಬಿಗಳಿಂದ ದೂರ ...
ಮುಂದಿನ ಹದಿನೈದು ದಿನಗಳನ್ನು ದಿಲ್ಲಿಯ ತಾಪದಿಂದ, ಗುಡುಗುವ ಹರ್ಯಾನ್ವಿಗಳಿಂದ, ಕುಣಿಯುವ ಪಂಜಾಬಿಗಳಿಂದ, ದುರುಗುಟ್ಟುವ ಕಾರು ಡ್ರೈವರುಗಳಿಂದ ದೂರವಾದ, ಪ್ರಶಾಂತವಾದ ಮೈಸೂರಿನಲ್ಲಿ ಕಳೆಯಲಿದ್ದೇನೆ. ಮೇ ತಿಂಗಳ ಕೊನೆಯಲ್ಲಿ ಬರುವ ಮಳೆಯನ್ನು ದಿಲ್ಲಿಯಾಗಲೇ ಕಂಡಿದೆ. ಇನ್ನು ಕುದಿಯಲು ಶುರುವಾದರೆ ಮಾನ್ಸೂನ್ ಬಂದಾಗಲೇ ಸ್ವಲ್ಪ ಮಟ್ಟಿಗೆ ತಣಿಯುವದು. ಹದಿನೈದು ದಿನಗಳಿಗಾದರೂ ಈ ಸೆಕೆಯಿಂದ ಮುಕ್ತಿ ಪಡೆಯುವುದೇ ನನ್ನ ಮುಖ್ಯ ಉದ್ದೇಶ. ಮೈಸೂರಿನಲ್ಲಿ ಬ್ಲಾಗಿಸುವಂತ ಘಟನೆ ನಡೆಯುವದು ಕಷ್ಟವೇ! ಏನಾದರೂ ಸಿಗಬಹುದು, ಸಿಕ್ಕರೆ ವಾಪಸಾದ ಮೇಲೆ ಬ್ಲಾಗಿಸುತ್ತೇನೆ.
7 Comments:
ಮೈಸೂರಿನ ಸುತ್ತಮುತ್ತಲಿನ ಹಳ್ಳಿಗಳಲ್ಲಿ ತಿರುಗಾಡಿದರೆ ಖಂಡಿತಾ ಬರೆಯಬಹುದು.ಎತ್ತ ನೋಡಿದರೂ ಮಳೆಗಾಲದ ಸೌಂದರ್ಯ ತುಂಬಿತುಳುಕುತ್ತಿದೆ."ಕುದ್ರೆ ಇಲ್ಲದ್ ಗಾಡಿಗಳು, ಎಣ್ಣೆ ಇಲ್ಲದ್ ದೀಪಗಳು ತುಂಬಿದ್" ಮೈಸೂರಿಗೆ ಸ್ವಾಗತ. ವಾಹನಗಳು ಕಮ್ಮಿ ಇದ್ದರೂ ಸಿಗ್ನಲ್ಗೇನೂ ಕಮ್ಮಿ ಇಲ್ಲ. :)
regards
yashaswini
ಕ್ಷಮಿಸಬೇಕು. ನೀವು ಮೈಸೂರಿನವರು ಎಂದು ನನಗೆ ತಿಳಿದಿರಲಿಲ್ಲ.
Dilli matthu Mysooru ajagajanthara!!!
Yaake hosa posts illa???
ನಾನು ಇದನ್ನು ಓದಿ ಪ್ರತಿಕ್ರಿಯಿಸೋ ಹೊತ್ತಿಗೆ ನೀವು ಮರಳಿ ದೆಹಲಿಯನ್ನು ಸೇರಿಕೊಂಡಿದ್ದೀರೇನೋ ಅನ್ನಿಸಿಬಿಟ್ಟಿತು, ಆದರೂ ನಿಮ್ಮ ಮೈಸೂರಿನ ಹೊಸ ಅನುಭವಗಳ ಬಗ್ಗೆ ಇನ್ನೂ ಬರೆಯದಿದ್ದುದರಿಂದ ನನ್ನ ಈ ಅನಿಸಿಕೆಯನ್ನು ಇಲ್ಲಿ ಬರೆಯಬೇಕಾಯಿತು!
self-fulfilling prophecy ಎಂಬಂತೆ ಮೈಸೂರಿನಲ್ಲಿ ಬ್ಲಾಗಿಸುವಂತಹದೇನೂ ನಡೆಯಲಿಲ್ಲ!ಮೈಸೂರಿನಲ್ಲಿ ನನ್ನ ಮನಸ್ಸು ಎಷ್ಟು ನಿರಾಳವಾಗಿರುತ್ತದೆಂದರೆ ಓದುವದು, ಬರೆಯುವದು ಇವುಗಳ ಯೋಚನೆಯೂ ನನ್ನ ಹತ್ತಿರ ಸುಳಿಯುವದಿಲ್ಲ. ವಾಪಸಾದ ಮೇಲೆ ಒಂದರ ಮೇಲೊಂದು ಕೆಲಸ ಬಂದು ಬರೆಯುವ ಅವಕಾಶವೇ ಸಿಕ್ಕಿಲ್ಲ.
ಮಧು ಮತ್ತು ಸತೀಶ್, ನೀವು ತೋರಿಸಿರುವ ಆಸಕ್ತಿಗೆ ನಾನು ಆಭಾರಿ. ಬ್ಲಾಗಿಸುವಂತಹ ಒಂದೆರೆಡು ವಿಷಯಗಳು ನನ್ನ ಮನಸ್ಸಿನಲ್ಲಿವೆ. ಆದಷ್ಟು ಬೇಗ ಈ ವಿಷಯಗಳನ್ನು ಕುರಿತು ಬ್ಲಾಗಿಸುತ್ತೇನೆ. ವಿನಾಯಕ.
ಅಗಸೆಯ ದಡದಿಂದ ಮತ್ತೆ ಹುಟ್ಟಿ ಬರುವ
ಸಣ್ಣ ಸಣ್ಣ ಮೀನುಗಳು
ಮಳೆಗಾಲದಲ್ಲಿ ಮಾಯವಾಗಿ
ಮತ್ತೆ ಮಳೆಮುಗಿದೊಡನೆ
ಮಿಂಚುಳ್ಳಿಗಳ ಬಾಯಿಗೆ
ಆಹಾರವಾಗಲು ಬರುತ್ತವೆ.
ಅದುವರೆಗೆ ಅವೆಲ್ಲಿರುತ್ತವೆ ಗೊತ್ತಿಲ್ಲ
ಮೈಸೂರಿಗಂತು ಹೋಗೋಕಾಗಲ್ಲ
ಯಮುನಾನದಿಯ ನೀರು ಕಲುಸಿತ
ಮತ್ತೆ ನಿಮ್ಮೊಂದಿಗೆ ಬಂದಾವೆ?
Post a comment
<< Home